ಕವಿ-ವೇದಾಂತಿ

ಈ ಹಾಡು ಕೇಳದೇ ಇರುವ ಕನ್ನಡಿಗರೇ ಇಲ್ಲವೇನೋ. ಹಾಡು ಕೇಳಿದಾಗಲೆಲ್ಲ, ಓದಿದಾಗಲೆಲ್ಲ ಬದುಕಿನ ಬಗ್ಗೆ ಏನೋ ಒಂದು ಹೊಸ ದಾರಿ ಕಂಡಂತೆ ಅನಿಸುತ್ತದೆ. ನೇರವಾದ ಚೆಲುವಾದ ಹಾಡು. ನಿಮ್ಮಂದಿಗೆ ಹಂಚಿಕೊಳ್ಳುವ ಹಂಬಲದಿಂದ ಇಲ್ಲಿ ಬರೆಯುತ್ತಿರುವೆ.


ವೇದಾಂತಿ ಹೇಳಿದನು
ಹೊನ್ನೆಲ್ಲ ಮಣ್ಣು
ಕವಿಯೊಬ್ಬ ಹಾಡಿದನು
ಮಣ್ಣೆಲ್ಲ ಹೊನ್ನು!

ವೇದಾಂತಿ ಹೇಳಿದನು
ಈ ಹೆಣ್ಣು ಮಾಹೆ
ಕವಿಯು ಕನವರಿಸಿದನು
ಓ ಇವಳೆನ್ನ ಚೆಲುವೆ
ಇವಳ ಜೊತೆಯಲಿ ನಾನು
ಸ್ವರ್ಗನೇ ಗೆಲುವೆ!

ವೇದಾಂತಿ ಹೇಳಿದನು
ಈ ಬದುಕು ಶೂನ್ಯ
ಕವಿ ನಿಂತು ಸಾರಿದನು
ಇದು ಅಲ್ಲ ಶೂನ್ಯ
ಜನ್ಮ ಜನ್ಮದಿ ಸವಿದೆ
ನಾನೆಷ್ಟು ಧನ್ಯ!

ಕಬ್ಬಿಗ/ನೆಗಳ್ಚು : ಜಿ ಎಸ್ ಶಿವರುದ್ರಪ್ಪ
ಕಬ್ಬಸಿವುಡಿ : ಕಾರ್ತೀಕ

ಹಾಡಿದವರು: ಪಿ.ಬಿ.ಶ್ರೀನಿವಾಸ

2 comments:

ಕುಮಾರಸ್ವಾಮಿಯವರೆ,
ಈ ಹಾಡನ್ನು ನೆನಪಿಸಿದ್ದಕ್ಕಾಗಿ ಧನ್ಯವಾದಗಳು

September 6, 2008 at 11:27 PM  

ರವಿ ಕಾಣದ್ದನ್ನು ಕವಿ ಕಂಡ ಎನ್ನುತ್ತಾರಲ್ಲ.. ಹಾಗೆ ಕವಿಯ ಕಲ್ಪನೆ ಊಹೆಗೂ ಮೀರಿದ್ದಾಗಿರುತ್ತದೆ...

September 16, 2008 at 11:44 PM  

Newer Post Older Post Home

Blogger Template by Blogcrowds