ನಾನು ರಾಮಾಯಣ ಮಹಾಭಾರತ ಎರಡೂ ಸರಿಯಾಗಿ ಓದಿಲ್ಲ. ಕೇವಲ ಶಾಲೆಯಲ್ಲಿ ಕೇಳಿದ ಕಥೆ, ಅಲ್ಲಿ ಇಲ್ಲಿ ಕೇಳಿದ ಹರಿಕಥೆ. ಸ್ವಲ್ಪ ಅಜ್ಜ ಹೇಳಿದ್ದು ಇಷ್ಟು ಮಾತ್ರ ನನಗೆ ತಿಳಿದಿರುವ ರಾಮಾಯಣ, ಮಹಾಭಾರತ. ನನಗೆ ಈಗ ಓದು ಬೇಕೆನ್ನುವ ಹಂಬಲ ತುಂಬಾ ಇದೆ. ಆದರೆ ಸಮಸ್ಯೆ ಏನಂದರೆ ರಾಮಾಯಣ ಮಹಾಭಾತಕ್ಕೆ ಸಂಬಂದಿಸಿದಂತೆ ನೂರಾರು ಹೊತ್ತಿಗೆ ಅಂಗಡಿಯಲ್ಲಿ ಸಿಗುತ್ತಿವೆ. ಯಾವುದನ್ನು ಕೊಳ್ಳುವುದು? ಇದು ನನ್ನ ಬುದ್ಧಿಗೆ ಸರಿಯಾಗಿ ಅರಿವಾಗುತ್ತಿಲ್ಲ. ನನಗೆ ತುಂಬಾ ಆಳವಾಗಿ ಅಧ್ಯಯನ ಮಾಡುವ ಮನಸ್ಸಿದೆ.
ಸರಳವಾಗಿ, ಸಮಗ್ರವಾಗಿರುವ ಪುಸ್ತಕಗಳ ಬಗ್ಗೆ ನನಗೆ ಯಾರಾದರು ತಿಳಿಸುವಿರ? ಕನ್ನಡದಲ್ಲಿ ಬರೆದವರ ಹೆಸರು, ಪ್ರಕಾಶಕರು, ಸಿಗುವ ಸ್ಥಳ. ಇಷ್ಟೂ ಮಾಹಿತಿಗೆ ನಿಮ್ಮಲ್ಲಿ ಕೇಳಿಕೊಳ್ಳುತ್ತಿರುವೆನು. ನಿಮ್ಮ ಅಮೂಲ್ಯ ಸಲಹೆಯ ನಿರೀಕ್ಷೆಯಲ್ಲಿ.ಮುಂಚಿತವಾಗಿ ನಿಮ್ಮೆಲ್ಲರಿಗೆ ಧನ್ಯವಾದಗಳನ್ನು ಸಲ್ಲಿಸುತ್ತ.




ಕುಮಾರಸ್ವಾಮಿ.ಕಡಾಕೊಳ್ಳ
ಪುಣೆ

2 comments:

ಕುಮಾರ್,
ನಿಮ್ಮ ಆಸಕ್ತಿಗೆ hats off.
ರಾಮಾಯಣ- ಮಹಭಾರತಗಳನ್ನು ಭಾರತ ದರ್ಶನ ಪ್ರಕಾಶನದವರು ವಾಲ್ಯೂಮ್ ಗಟ್ಟಲೆ ಹೊರತಂದಿದ್ದಾರೆ. ಆದರೆ, ಶ್ಲೋಕಾರ್ಥ ಸಹಿತವಾದ ಅವೆಲ್ಲವನ್ನೂ ಕುಳಿತು ಓದುವಷ್ಟು ಸಹನೆ- ಸಂಯಮ ಇರುವುದಾದರೆ ಮಾತ್ರ ಅವನ್ನು ಕೊಳ್ಳಿ.
ಅಂದಹಾಗೆ, ಈಗ ಮೂಲ ರಾಮಾಯಣ ಮತ್ತು ಮಹಾಭಾರತಗಳು ಇಂದು ಸಿಗುವುದೇ ಇಲ್ಲ. ಮೂಲಕ್ಕೂ ಪ್ರಕ್ಷೇಪಗಳು ಸೇರಿಬಿಟ್ಟಿವೆ. ಚಿಂತೆಯಿಲ್ಲ. ಈವರೆಗೆ ರಾಮಾಯಣ- ಮಹಾಭಾರತಗಳ ಮೇಲೆ ಬಂದಿರುವ ಪುಸ್ತಕಗಳೆಲ್ಲವೂ ರುಚಿಕಟ್ಟಾಗಿವೆ. ನೀವು ಯಾವುದನ್ನಾದರೂ ಕೊಂಡು ಓದಬಹುದು!
( ಈ ಮಾತು ಹೇಳೋಕೆ ನೀನೇ ಆಗ್ಬೇಕಿತ್ತಾ? ಅನ್ಬೇಡಿ ಮತ್ತೆ!)

- ಚೇತನಾ

August 22, 2008 at 10:13 PM  

ಈ ಮಾತು ಹೇಳೋಕೆ ನೀನೇ ಆಗ್ಬೇಕಿತ್ತಾ? ಅನ್ಬೇಡಿ ಮತ್ತೆ!
ಚೇತನ್ ರವರೆ,
ಎಲ್ಲದನ್ನೂ ನೀವೇ ಹೇಳಿದರೆ ನನಗೆ ಇನ್ನೇನು ಉಳಿದಿದೆ ಹೇಳಲು?
ನಿಮ್ಮ ಸಲಹೆಗೆ ನಾನು ಋಣಿ. ಈ ಹೊತ್ತಿಗೆಗಳನ್ನು ಕೊಂಡು ಖಂಡಿತ ಓದುತ್ತೇನೆ.

ಸ್ವಾಮಿ

August 22, 2008 at 10:40 PM  

Newer Post Older Post Home

Blogger Template by Blogcrowds